Posts

Showing posts from December, 2024

ನೆನಪುಗಳ ಮಾತು ಮಧುರ...

    ಮೊನ್ನೆ ಕಛೇರಿಯಲ್ಲಿ ಕುಳಿತು ಕಾಫೀ ಹೀರುತ್ತಿದ್ದ ಸಮಯ. ಸಾಮಾನ್ಯವಾಗಿ ನಾವು ಪ್ರಾಪಂಚಿಕ, ನೈಸರ್ಗಿಕ, ಪ್ರಾಚೀನ, ಹೊಸ-ಹಳೆ ಹತ್ತು ಹಲವು ವಿಚಾರವನ್ನು ಹರಟುವ ಸಮಯವಿದು. ಆ ದಿನ ಹೀಗೆ ಮಾತನಾಡುತ್ತಾ ಬಂದ ವಿಷಯ ಬಾಲ್ಯ ಮತ್ತು ಆ ದಿನಗಳು. ನಾನೇನು ಬಹಳ ಹಳಬಳಲ್ಲ. ಈಗಿನವರ ಮಾತಲ್ಲಿ ಹೇಳೋದಾದ್ರೆ ೯೦ʼಸ್‌ ಕಿಡ್.‌ ಆದರೂ ೮೦ರ ಸಹೋದ್ಯೋಗಿಗಳ ಬಾಲ್ಯ ಮತ್ತು ಆಗಿದ್ದ ನೆನಪುಗಳಿಗೂ , ನನ್ನ ಬಾಲ್ಯದ ದಿನಗಳಿಗೂ ಜಾಸ್ತಿ ಏನೂ ವ್ಯತ್ಯಾಸವಿಲ್ಲ ಅನ್ನಿಸಿತು. ಆದರೆ, ಕಳೆದ ೧೦-೧೫ ವರ್ಷ ಎಷ್ಟು ಬೆಳವಣಿಗೆಗಳಾಗಿದೆ ಎಂದರೆ ನನಗೇ ವಯಸ್ಸಾಯ್ತು ಅನ್ನಿಸೋವಷ್ಟು.!  ಮೊದಲೆಲ್ಲಾ ಹೋಟೆಲ್‌ ಅಂದ್ರೆ ಏನೋ ಖುಷಿ. ವರ್ಷಕ್ಕೆ ಎರಡೋ ಮೂರೋ ಬಾರಿ ಹೋಟೆಲ್‌ ಊಟ ಸವಿಯುವ ಭಾಗ್ಯ. ಅದೂ, ಹೆಚ್ಚೆಂದರೆ ಮಸಾಲೆ ದೋಸೆ, ಇಡ್ಲಿ ವಡೆ, ಐಸ್‌ ಕ್ರೀಮ್‌ ಮತ್ತೊಂದು ತಂಪು ಪಾನೀಯ. ಹಬ್ಬ-ಹರಿದಿನ ಅಥವಾ ಹುಟ್ಟು ಹಬ್ಬ ಬಂದರೆ ಹೊಸ ಬಟ್ಟೆ..ಹೊಸ ಬಟ್ಟೆ ತೆಗೆದುಕೊಳ್ಳೋಕೆ ಅಂಗಡಿಗೆ ಹೋಗಿ,ಹೋಗಿ ಆ ಅಂಗಡಿಯ ರೆಗ್ಯುಲರ್‌ ಗ್ರಾಹಕರಾಗ್ತಿದ್ವಿ. ಅಥವಾ ಇದ್ದಿದ್ದೇ ಮೂರು ಮತ್ತೊಂದು ಊರಿಗೆಲ್ಲಾ ಫೇಮಸ್‌ ಅಂಗಡಿಗಳು ಅಂತ ಅಂದ್ರೂ ತಪ್ಪಿಲ್ಲ.  ಸಂಜೆ ಶಾಲೆ ಮುಗಿಸಿ ಬಂದು ಬ್ಯಾಗ್‌ ಎಸೆದು ಅಕ್ಕ ಪಕ್ಕದ ಮನೆ ಮಕ್ಕಳೆಲ್ಲಾ ಸೇರಿ ಲಗೋರಿ, ಕ್ರಿಕೆಟ್‌, ಕುಂಟಬಿಲ್ಲೆ ಆಡೋ ಮಜಾನೇ ಬೇರೆ. ದಸರ ರಜ ಆ ದಿನಗಳ ಸುಂದರ ಸಮಯ. ಇನ್ನೇನು ರಜ ಆರಂಭ ಆಗೋವಷ್ಟ್ರಲ್ಲ...