Skip to main content

ಪುಷ್ಪಗಿರಿ ಚಾರಣ

ಕುಮಾರ ಪರ್ವತ...
ಎಂಜಿನಿಯರಿಂಗ್ ಟೈಮ್ ಇಂದನೂ ಬಹಳ ಕಾಡಿಸಿದ್ದ ಕಾಯಿಸಿದ್ದ ಚಾರಣ. ಎಲ್ಲದಕ್ಕೂ ಶುಭ ಘಳಿಗೆ ಬೇಕೂ ಅನ್ನೋ ತರ ಕೆಲ್ಸಕ್ಕೆ ಸೇರಿ ಎರಡು ವರ್ಷ ಆದ್ಮೇಲೆ KP TREK ಕನಸು ನನಸಾಗೋ ಕಾಲ ಬಂದಿತ್ತು.
ಹದಿನಾಲ್ಕು ಜನ ಚಾರಣ ಪ್ರಿಯರು ಬೆಂಗಳೂರಿಂದ ಸುಬ್ರಮಣ್ಯ ಟ್ರೈನ್ ಓಡಿ ಓಡಿ ಹತ್ತಿದ್ವಿ...ರೈಲು ಪ್ರಯಾಣ ಸ್ನೇಹಿತರ ಜೊತೆ ಬೇರೇನೆ ಅನುಭವ. ನಗು...ಕಥೆಗಳು...ನೆನಪುಗಳು...ಹೀಗೆ ಸಾಗಿತ್ತು ಪ್ರಯಾಣ. ಆವಾಗಾವಾಗ ಬೇರೆ ಪ್ರಯಾಣಿಕರ ಹತ್ರ ಬೈಸ್ಕೊಂಡು ಮುಂದುವರೆದಿತ್ತು ನಮ್ಮ ರಥ..ಮಧ್ಯರಾತ್ರಿ ತನಕ ಜಗದ ಆಗು ಹೋಗುಗಳ ಬಗೆಗೆಲ್ಲ ಮಾತಾಡಿ, ಎಂಜಿನಿಯರಿಂಗ್ ಮಾರ್ವೆಲ್ ಗಳೆಲ್ಲವನ್ನು ಲಿಸ್ಟ್ ಮಾಡಿ... ಮಲ್ಕೊಂಡು ಏಳೋವಾಗ ಗಂಟೆ ಸುಮಾರು ಐದು..ರೈಲ್ವೇ ಸ್ಟೇಷನ್ ಇಂದ ಸುಬ್ರಹ್ಮಣ್ಯಕ್ಕೆ ಸರಕಾರಿ ಬಸ್ನಲ್ಲಿ ಸುಮಾರು ೩೦ನಿಮಿಷ ಪ್ರಯಾಣ. ಬಂದು ಫ್ರೆಶ್ ಅಪ್ ಆಗಿ ಎಕ್ಸ್ಟ್ರಾ ಲಗ್ಗೇಜ್ ನೆಲ್ಲಾ ರೂಂನಲ್ಲಿಟ್ಟು ಒಂದು ದೊಡ್ಡ ಬ್ಯಾಗ್ ಹಿಡ್ಕೊಂಡು ಅಲ್ಲೇ ತಿಂಡಿ ತಿಂದು ದೇವಸ್ಥಾನದ ಹಿಂದಿನ ದಾರೀಲಿ ಚಾರಣ ಸ್ಟಾರ್ಟ್ ಮಾಡಿದ್ವಿ. ಇದು ಎರಡು ದಿನಗಳ ನಡೆ ಆಗಿರೋದ್ರಿಂದ ಟೆಂಟ್ ಗಳು ಅಗತ್ಯ. ದಾರಿಯಲ್ಲೇ ಹಲವು ಕಡೆ ಟೆಂಟ್ ಗಳನ್ನು ಬಾಡಿಗೆಗೆ ಕೊಡುವ ಸೌಲಭ್ಯ ಇದೆ. ಮುಂಗಡ ಹಣ ಪಾವತಿಸಿ ಟೆಂಟ್ ಗಳನ್ನೂ ಹಿಡ್ಕೊಂಡು ಅಲ್ಲ ಅಲ್ಲ...ಹೊತ್ಕೊಂಡು ಸಾಗಿತ್ತು ನಮ್ಮ ನಡೆ.
ಮೊದಲ ಕೆಲವು ಗಂಟೆಗಳು ಕಾಡು ಮತ್ತು ಸ್ವಲ್ಪ ಕಡಿದಾದ ದಾರಿ. ಕರಾವಳಿ ಆಗಿದ್ರಿಂದ ಅರ್ಧ ದಾರಿಗೆ ಬೆವರಿನ ಸ್ನಾನ ಆಗಿತ್ತು. ನಮ್ಮ ಮೊದಲ ದಿನದ ನಿಲ್ದಾಣ ಭಟ್ರ ಮನೆ. ಅಲ್ಲಿಗೆ ಸುಮಾರು 6ಕಿ.ಮೀ ದೂರ.. ನಡ್ದು ನಡ್ದು ಸುಸ್ತಾಗಿ ಎಲ್ಲಾದ್ರೂ ನೀರು ಸಿಕ್ಕಿದ್ರೆ ಚೆನ್ನಾಗಿರೋದು ಎಂದು ಅಂದ್ಕೊಳ್ತ ಇರೋವಾಗ ನಮ್ಗೆ ಗೊತ್ತಾಗಿದ್ದು ಅಲ್ಲೇ ಹತ್ರ ಒಂದು ಸಣ್ಣ ಜಲಪಾತ ಇದೆ ಅಂತ... ರೋಗಿ ಬಯಸಿದ್ದೂ ವೈದ್ಯ ಹೇಳಿದ್ದು ಒಂದೇ ಅನ್ನೋ ಹಾಗೆ ಎಲ್ಲರೂ ಬ್ಯಾಗ್ ಗಳನ್ನ ಬದಿಗೆ ಹಾಕಿ ನೀರಿನೆಡೆ ಹೆಜ್ಜೆ ಹಾಕಿದೆವು.
ಸುಡು ಬಿಸಿಲಿಗೆ ತಣ್ಣಗಿನ ನೀರಾಟ ಮನಸ್ಸಿಗೆ ದೇಹಕ್ಕೆ ಬೇಕಾದ ಎಲ್ಲಾ ಶಕ್ತಿಯನ್ನೂ ಕೊಟ್ಟಿತ್ತು... 
ಮುಂದೆ ಭೀಮ ಬಂಡೆಯನ್ನು ಸಾಗಿ ಸಿಕ್ಕಿದ್ದು ಹುಲ್ಲುಗಾವಲು...ಇಲ್ಲಿ ಪ್ರಯಾಣ ಸ್ವಲ್ಪ ಸುಲಭ. ಇಷ್ಟ್ರಲ್ಲಾಗಲೇ ಜಿಗಣೆಗಳು ಕೂಡ ನಮ್ಮ ಸ್ನೇಹಿತರಾಗಿತ್ತು. ಸಂಜೆ ಆಗ್ತಾ ಇತ್ತು..ಹಾಗೆ ನಾವು ಭಟ್ರ ಮನೇನು ತಲುಪಿದ್ವಿ ಸಮಯ ಸುಮಾರು ನಾಲ್ಕು. ಸರಿಯಾದ ಸಮಯಕ್ಕೆ ಮಳೇನು ಪ್ರಾರಂಭ ಆಯ್ತು..ಮದ್ಯಾಹ್ನದ ಊಟ ಆಗಿ ಫಾರೆಸ್ಟ್ ಆಫೀಸ್ ಹತ್ರ ಟೆಂಟ್ ಪ್ರತಿಷ್ಠಾಪಿಸಲು ಜಾಗ ಹುಡ್ಕಿ ಮಳೆ ನಿಂತ ಕೂಡ್ಲೇ ನಮ್ಮ ಮನೆಗಳನ್ನು ನಿರ್ಮಾಣ ಮಾಡಿದ್ವಿ.. ಟೆಂಟ್ pitching ಮತ್ತು ಸ್ಟೇ.. ಇದು ನಂಗೆ ಮೊದಲ ಅನುಭವ...ಇದಾಗಿ ಕೆಲವ್ರು ಅಲ್ಲೇ ರೆಸ್ಟ್ ಮಾಡಿದ್ರೆ ನಾವು ಕೆಲವ್ರು ಅಲ್ಲೇ ಪರಿಸರ ವೀಕ್ಷಣೆ ಮಾಡ ಹೊರಟ್ವಿ.. ಸುಂದರ ಸಂಜೆಯ ಸೂರ್ಯಾಸ್ತದ ದರ್ಶನವೂ ಕಣ್ತುಂಬ ಆಯ್ತು. 
ಹಾಗೆ ಮರುದಿನದ ಸಾಹಸದ ದರ್ಶನವೂ ಕೂಡ. ರಾತ್ರಿ ಊಟಕ್ಕೆಂದು ಹೋದಾಗ ಚಾರಣ ಮುಗ್ಸಿದ್ದ ಒಬ್ಬ ಮಹಾನುಭಾವ ತನ್ನ ಸಾಹಸಗಾಥೆಯನ್ನ ಅತಿಶಯೋಕ್ತಿ ಥರ ಹೇಳೋಕೆ ಶುರು ಮಾಡ್ದ. ಎಲ್ಲಾರ್ಗು ಅಲ್ಪ ಸ್ವಲ್ಪ ಭಯ ಪ್ರಾರಂಭ ಆದ್ರೂ ಏನಾದ್ರೂ ಆಗ್ಲಿ ಎಷ್ಟೇ ಕಷ್ಟ ಇರ್ಲಿ KP ಪೀಕ್ ಹೋಗೆ ಹೋಗ್ಬೇಕು ಅನ್ನೋ ತೀರ್ಮಾನಕ್ಕೆ ಬಂದ್ವಿ. ಭಟ್ರು ಜೊತೆ ಸ್ವಲ್ಪ ಹರಟೆ ಮುಗ್ಸಿ ನಮ್ ನಮ್ಮ ಟೆಂಟ್ ಸೇರ್ಕೊಂಡ್ವಿ...ದೇವರ ಕೃಪೆಯಿಂದ ರಾತ್ರಿ ಮಳೆ ಆಗಿಲ್ಲ..ನಿದ್ರೇನು ಬಂತು.
ಮುಂಜಾನೆ ಐದಕ್ಕೆ ಎದ್ದು ಲಗ್ಗೇಜ್ ಗಳನ್ನ ಫಾರೆಸ್ಟ್ ಆಫೀಸ್ ನಲ್ಲಿಟ್ಟು ಚಿಕ್ಕ ಬ್ಯಾಗ್ ಹಿಡ್ಕೊಂಡು ಎರಡನೇ ದಿನದ ವಾಕ್ ಸ್ಟಾರ್ಟ್ ಆಯ್ತು.
ಎರಡನೇ ದಿನದ ಮೊದಲ ನಿಲ್ದಾಣ ಕಲ್ಲು ಮಂಟಪ... ಇಲ್ಲೇ ಹತ್ತು ಹೆಜ್ಜೇಲಿ ಬರತ್ತೆ ಅಂತ ಕಥೆ ಹೇಳ್ಕೊಂಡು ಸುಮಾರು ದೂರ ಬಂದಾದ್ಮೇಲೆ ಒಂದು ಪುಟ್ಟ ನೀರಿನ ತೊರೆ ಸಿಗ್ತು...ಬೆಟ್ಟದಲ್ಲಿ ಸಿಗೋ ನೀರಿನ ಸವಿ ದುಡ್ಡು ಕೊಟ್ಟು ಕುಡ್ಯೋ ನೀರಿನಲ್ಲಿ ಸಿಗೋಲ್ಲ. ವಾಟರ್ ಬಾಟಲ್ ಗಳೆಲ್ಲವನ್ನೂ ತುಂಬ್ಸ್ಕೊಂಡು ಸ್ವಲ್ಪ ದೂರ ಹತ್ತಿ ಇಳಿದು ಬಂದ್ ಕೂಡ್ಲೇ ಸಿಕ್ಕಿದ್ದು ಕಲ್ಲು ಮಂಟಪ. ಈ ದಾರಿ ಪೂರ್ತಿ ಕಾಣೋದು ಹಸಿರು ಹಾಸು ಮತ್ತು ಸಮುದ್ರದ ಅಲೆಯಂತೆ ಇರೋ ಬೆಟ್ಟಗಳ ಸಾಲು...ಇದನ್ನ ಶಬ್ದಗಳಲ್ಲಿ ಹೇಳೋದು ಸ್ವಲ್ಪ ಕಷ್ಟವೇ ಸರಿ. ಇಲ್ಲೇ ನಮ್ಮ ಬೆಳಗಿನ ಉಪಹಾರ...ಟಿಫಿನ್ ನಲ್ಲಿ ಹಿಂದಿನ ರಾತ್ರಿ ಅನ್ನ, ಪಾಯಸ ಎಲ್ಲಾ ಹಾಕೊಂಡು ಬಂದಿದ್ವಿ..

ಮುಂದಿನ ನಿಲ್ದಾಣ, ಶೇಷ ಪರ್ವತ... ಕುಮಾರ ಪರ್ವತದ ವಿಶೇಷ ಏನಂದ್ರೆ ಒಂದು ಬೆಟ್ಟ ಹತ್ತಿ ಇಳಿತಾ ಇದ್ದ ಹಾಗೆ ಇನ್ನೊಂದು ಬೆಟ್ಟ ಕಣ್ಮುಂದೆ ಇರತ್ತೆ...ಹೀಗೆ ಸಾಗ್ತ ಫೋಟೋ ಕ್ಲಿಕ್ಕಿಸುತ್ತ ಪಯಣ ಮುಂದೆ ಸಾಗಿತ್ತು.
ಶೇಷ ಪರ್ವತದ ದೃಶ್ಯ ಅಧ್ಬುತ.
ತೇಲುವ ಹಾಲ್ಮೋಡದೊಡನೆ ಹಸಿರ ತುತ್ತ ತುದಿಯ ಮಿಲನ....ಎಂಬ ಸಾಲು ಇದಕ್ಕೆ ಹೇಳಿ ಮಾಡಿಸಿದ್ದು..
ಮೋಡಗಳೆಲ್ಲ ಚದುರಿ
ಮಂಜು ಸರಿದಾಗ ಕಾಣೋ ಈ ಬೆಟ್ಟದ ತುದಿ ತಲುಪಿದಾಗ ಒಂದು ಮೈಲಿಗಲ್ಲು ತಲುಪಿದ ಸಂತೋಷ ಹಾಗೆ ಸ್ವಲ್ಪ ಸುಸ್ತು.

ತುಂಬಾ ಜನ ಇದನ್ನೇ ಕುಮಾರ ಪರ್ವತ ಅಂದ್ಕೊಂಡು ವಾಪಸ್ ಹೋಗ್ತಾರೆ..ಹೋಗ್ತಾ ಇದ್ರು ಕೂಡ.
ಆದ್ರೆ ನಿಜ ಏನಂದ್ರೆ ಕುಮಾರ ಪರ್ವತ ಇಲ್ಲಿಂದ ಇನ್ನೂ ೧ ಕಿ. ಮೀ ಮುಂದೆ. ಸಮಯ ಸಾಗ್ತಾ ಇದ್ದಿದ್ರಿಂದ ಬೇಗ ಬೇಗ ಮುಂದೆ ಹೆಜ್ಜೆ ಹಾಕಿದ್ವಿ. ಈ ದಾರಿ ಕಾಡಿನದು...ಹಚ್ಚ ಹಸಿರು ತುಂಬಿನ ಕಾಡಿನ ಮಧ್ಯ ನಡಿಯೋದು ಅದಕ್ಕೆ ಜೀವ ಕೊಡೋದು ಕಾಡಿನ ಶಬ್ಧ. ಆ ನಿಶಬ್ಧದಲ್ಲೂ ಪ್ರಕೃತಿ ಏನೋ ಹೇಳ್ತಾ ಇದೆ ಅನ್ನೋ ಅನುಭವ ಅದು.
 ಮುಂದೆ ಸ್ವಲ್ಪ ಸಾಹಸ ಮಾಡ್ಕೊಂಡು ಕಲ್ಲು ಬಂಡೆ ಹತ್ತಿ ತಲುಪಿದ್ದು ಪುಷ್ಪಗಿರಿ ಅಥವಾ ಕುಮಾರ ಪರ್ವತದ ತುದಿಯನ್ನ. ಅಲ್ಲಿಂದ ಕೊಡಗು ದೃಶ್ಯ ಕಾಣುತ್ತೆ. ಇಲ್ಲೊಂದು ಸಣ್ಣ ಗುಡಿಯೂ ಇದೆ. ಇಲ್ಲಿ ಆಗೋ ಸಮಾಧಾನ...ಏನೋ ಸಾಧಿಸಿದ ಹೆಮ್ಮೆ ಎಲ್ಲರ ಮುಖದಲ್ಲೂ ನಗುವಾಗಿ ಹೊರ ಬಂದಿತ್ತು..
ಅಲ್ಲೇ ಸ್ವಲ್ಪ ಕುರುಚಲು ತಿಂಡಿ ತಿಂದು ಬಂದಿದ್ದೇವೆ ಅನ್ನೋ ಪುರಾವೆಗೆ ಹತ್ತಿಪ್ಪತ್ತು ಫೋಟೋಸ್ ತೆಗ್ದು ಬ್ಯಾಕ್ ಟು ಸುಬ್ರಮಣ್ಯನ ಶುರು ಮಾಡಿದ್ವಿ..ಗಂಟೆ ೧೨.

ಇಳಿಜಾರು ನಡೆ ಸುಲಭ ಅನ್ನೋ ತರ ಇದ್ರೂ ಮಂಡಿ ಮಡಚಿ ಮಡಚಿ ಒಂದು ಹಂತಕ್ಕೆ ಬರತ್ತೆ. ಅಂದಾಜಿನ ಪ್ರಕಾರ ಭಟ್ರ ಮನೆನ ೩ಕ್ಕೆ ತಲುಪ ಬೇಕಿದ್ದ ನಾವು ತಲುಪಿದ್ದು ೪.೩೦ಕ್ಕೆ. ಹೊಟ್ಟೆ ತಾಳ ಹಾಕ್ತಿತ್ತು. ಊಟ ಮುಗ್ಸಿ ಲಗ್ಗೇಜ್ ತಗೊಂಡು ಮತ್ತೆ ಅದೇ ದಾರಿಯ ಪ್ರಯಾಣ. ಕತ್ತಲೆ ಆಗ್ತಾ ಇತ್ತು. ಮಳೆ ಪ್ರಾರಂಭ ಆಯ್ತು. ಇಡೀ ಚಾರಣದಲ್ಲಿ ಅತ್ಯಂತ ಸಾಹಸಮಯ ಅನ್ಸಿದ್ದು ಇದೇ. ಕಗ್ಗತ್ತಲು..ಕಾಡು...ಜೋರಾಗಿ ಸುರಿತಿದ್ದ ಮಳೆ...ಸುಸ್ತಾಗಿರೋ ಕಾಲುಗಳು...ಆದ್ರೂ ಏನೋ ಖುಷಿ.
ಅಲ್ಲಲ್ಲಿ ಅಲ್ಪ ವಿರಾಮ ತಗೊಂಡು ಕೊನೆಗೂ ಗಂಟೆ ೯ಕ್ಕೆ ರೋಡ್ ಕಂಡ ತಕ್ಷಣ...ಅಬ್ಬಾ..ಅಂತೂ ಇಂತೂ ಬಂತು ಅನ್ನೋ ಭಾವನೆ.
ಕುಮಾರ ಪರ್ವತ, ಸುಲಭ ಅಲ್ಲ...ಅವೆಲ್ಲ ಇಲ್ದೆ ಕರ್ನಾಟಕದ ಕಠಿಣ ಚಾರಣದಲ್ಲಿ ಒಂದು ಅಂತ ಸುಮ್ನೆ ಅಂತಾರಾ? ಒಟ್ಟು ದೂರ ಸುಮಾರು ೨೭ಕಿ.ಮೀ..ಒಂದೇ ದಿನದಲ್ಲಿ ಮುಗಿಸೋಕೆ ಆಗತ್ತೆ ಆದ್ರೂ ಪ್ರಯಾಣದ ಆನಂದ ಇದ್ರಲ್ಲಿ ಸಿಗಲ್ಲ ಅನ್ನೋದು ನನ್ನ ಅಭಿಪ್ರಾಯ..
ಅಡೆ ತಡೆಗಳು, ಕಷ್ಟ ಅನ್ಸೋ ಸಂದರ್ಭಗಳು, ಮುಂದೆ ಹೆಜ್ಜೆ ಇಡೋಕೆ ಆಗೋದೇ ಇಲ್ಲ ಅನ್ನೋ ರೀತಿಯ ದಣಿವು ಇವೆಲ್ಲವೂ ಇರತ್ತೆ...ಇತ್ತು..ಆದ್ರೆ ಇದೆಲ್ಲದರ ಮಧ್ಯ ನೋಡೋ ಹಸಿರು...ಟೆಂಟ್ ನಲ್ಲಿ ಉಳಿಯೋ ಉತ್ಸಾಹ.. ದಾರಿಯುದ್ದಕ್ಕೂ ಹೇಳೋ ಕಥೆಗಳು..ಹಾಡೋ ಹಾಡುಗಳು..ರಾತ್ರಿ ನಡೆಯೋವಾಗ ಆ ಮೈನವಿರೇಳಿಸುವ ಅನುಭವ...it's all worth it.
ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು ಹಸುರಿಳೆಯುಸಿರೂ!
ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸುರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!
- ಕುವೆಂಪು

ಇವಾಗ ನಾನು ಕೂಡ ಹೇಳ್ತೇನೆ...
ನಾನು ಕುಮಾರ ಪರ್ವತ ಚಾರಣ ಮಾಡಿರುವೆ...ನೀವು?

Comments

  1. ಕುಮಾರ ಪರ್ವತ ಚಾರಣದ ಕಥನ ಚೆನ್ನಾಗಿದೆ. ದಶಕದ ಹಿಂದಿನ ನನ್ನ ಚಾರಣವನ್ನು ನೆನಪಿಸಿತು

    ReplyDelete

Post a Comment

Popular posts from this blog

"Hampi"ness

Hampi... Where do I start from? 3 days ago I only knew that Hampi which is in present "Vijayanagara" district is something which has wide variety of architectures , constructions and was one of the rich cities in Indian History. Prior to this while reading a book called "Tejo-Tungabhadra" I had some small imagination of how the city might have been and this also gave me a little more trigger to my dream of visiting Hampi. And then, it was there...in front of my eyes...the stories of how a vast amount of architectures were demolished by Bahamanis , the stories of richness , the stories of culture and heritage, the beauty of Indian architects...Each pillar had a story to tell. Each place was clearly shouting aloud its history. No, Hampi/Vijayanagara is not only about Krishnadevaraya... It's from Vidyaranya who laid a foundation to such a dream, it's from Harihara and Bukka who made the dream into reality. Here's to Hampiness.... Hampi w...

Kerala - A Bike Trip to God's Own Country

Kerala - A Bike Trip to God's Own Country  When it comes to Kerala trips, people speak about Munnar OR Wayanad in general... With the same thought we planned to have a Not so long trip to Kerala for 4 days since we had Christmas vacations on the way! With the suggestions from Kerala friends we learned that Munnar and Wayanad are at two Different parts of Kerala and it would be difficult to cover both of them. So as Part-1 , we planned to cover places from NORTH KERALA. Day 1: Started at 6am in the Saturday morning to Kannur from Bangalore, it was a 6 hour long ride. With breaks for breakfast and lunch, we reached Kannur(Kannanur) by 1pm and it turned out to be hotter than expected (30-33°C) since it stands along the coastal line. There are quite a few places that's beautiful in it's own way out there. We visited St.Angelo Fort which had a very long history and Payambalam beach which is a drive beach as well. Tired from a long journey we had a nice sleep at the end of the da...

One Earth!!!

               This curious world we inhabit is more wonderful than convenient; more beautiful than it is useful; it is more to be admired and enjoyed than used.  It says that our ancestors used to worship animals, rivers, mountains, trees.  Now, can this be called a mere blind belief? Or  this had some deeper meaning to it? We still follow these but like 2 faces of a coin. At one hand we worship one Peepal(Ashwatha) tree amidst a temple and on the other side destroy hectares of forests in the name of progress and development. Global warming is real. It is no more a small topic that we used to read in text books. The impact is seen and felt everywhere around the world. Let’s start from facts and current status of what the impact of Climate changes are in India : Heat waves, as the years pass we can and we are experiencing heat waves that are reaching upto 50 degrees in some part of India. Over population and climate chan...